ಕರ್ನಾಟಕ ರಾಜ್ಯ ರೈತ ಸಂಘ – ಹಸಿರು ಸೇನೆ Uncategorized ವಿಶ್ವ ರೈತ ದಿನಾಚರಣೆ, ಕೆ.ಎಸ್ ಪುಟ್ಟಣ್ಣಯ್ಯ ಜನ್ಮದಿನೋತ್ಸವ ಹಾಗೂ ರೈತ ಜಾಗೃತಿ ಸಭೆ

ವಿಶ್ವ ರೈತ ದಿನಾಚರಣೆ, ಕೆ.ಎಸ್ ಪುಟ್ಟಣ್ಣಯ್ಯ ಜನ್ಮದಿನೋತ್ಸವ ಹಾಗೂ ರೈತ ಜಾಗೃತಿ ಸಭೆ

ನಂಜನಗೂಡು ತಾಲೂಕು ನೇರಳೆ ಗ್ರಾಮದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತನ್ನ ಶಕ್ತಿ ಪ್ರದರ್ಶನ ಮಾಡಿದರು. ವಿಶ್ವ ರೈತ ದಿನಾಚರಣೆ, ಕೆ.ಎಸ್ ಪುಟ್ಟಣ್ಣಯ್ಯ ಜನ್ಮದಿನೋತ್ಸವ ಹಾಗೂ ರೈತ ಜಾಗೃತಿ ಸಭೆ ಮತ್ತು ಸಂಘಟನೆ ಸೇರ್ಪಡೆ ಕಾರ್ಯಕ್ರಮವನ್ನು ಇಂದು ಹಮ್ಮಿಕೊಳ್ಳಲಾಗಿತ್ತು. ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಾಧ್ಯಕ್ಷ ವಿದ್ಯಾಸಾಗರ್ ಹಾಗೂ ತಾಲೂಕು ಘಟಕದ ಅಧ್ಯಕ್ಷ ಸತೀಶ್ ರಾವ್ ನೇತೃತ್ವದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರೈತ ಮುಖಂಡರಾದ ಇಮ್ಮಾವು ರಘು, ಚೊಕ್ಕಹಳ್ಳಿ ನಂಜುಂಡಸ್ವಾಮಿ ಸೇರಿದಂತೆ ಇನ್ನಿತರೆ ಗಣ್ಯರೊಂದಿಗೆ ದೀಪ ಬೆಳಗಿಸಿ ವೇದಿಕೆ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಇದಕ್ಕೂ ಮುನ್ನ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ನೇರಳೆ ಗ್ರಾಮ ಘಟಕದ ನಾಮ ಫಲಕವನ್ನು ಅನಾವರಣ ಪಡಿಸಿದರು. ಆ ನಂತರ ವೇದಿಕೆಯಲ್ಲಿ ಹಸಿರು ಶಾಲು ನೀಡಿ, ಗ್ರಾಮದ 100ಕ್ಕೂ ಹೆಚ್ಚು ರೈತರುಗಳಿಗೆ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಂಘಟನೆಗೆ ಸೇರ್ಪಡೆ ಮಾಡಿಕೊಂಡರು.

ಈ ವೇಳೆ ಕರ್ನಾಟಕ ರಾಜ್ಯ ರೈತ ಕಾರ್ಯಾಧ್ಯಕ್ಷ ರೈತ ವಿದ್ಯಾಸಾಗರ್ ಮಾತನಾಡಿ, ಅನ್ನ ಇದ್ದರೆ ಪ್ರಾಣ, ಪ್ರಾಣ ಇದ್ದರೇ ಪರಾಕ್ರಮ. ಅನ್ನವನ್ನು ದೇವರು ಅಂತೀವಿ. ಈ ಅನ್ನ ಸೃಷ್ಟಿ ಮಾಡುವ ಅನ್ನದಾತ ದೇವರು ನಾವೇ. ಈ ದೇಶವನ್ನು ಕಟ್ಟಿರೋದು ಅಂಬಾನಿ, ಅದಾನಿ, ಮುಖ್ಯಮಂತ್ರಿ ಪ್ರಧಾನಮಂತ್ರಿ ಅಲ್ಲ. ಈ ದೇಶ ಸುಭದ್ರವಾಗಿರೋದು ಅನ್ನ ಕೊಡುವ ರೈತರಿಂದ, ರೈತರು ದೇವರ ಸಮಾನ, ರೈತ ದೇವರುಗಳು ಮನಸ್ಸು ಮಾಡಿದರೆ, ಯಾವುದೇ ಸರ್ಕಾರವನ್ನು ಅಧಿಕಾರಕ್ಕೆ ತರುತ್ತಾರೆ, ಇಲ್ಲ ಅಧಿಕಾರದಿಂದ ಕೆಡವುತ್ತಾರೆ. ರೈತರು ಒಗ್ಗುಟ್ಟು ಪ್ರದರ್ಶನವಾದರೆ, ಯಾರೊಬ್ಬರು ರೈತರ ತಂಟೆಗೆ ಬರೋದಿಲ್ಲ. ರೈತರ ಸಮಸ್ಯೆಗಳ ವಿರುದ್ಧ ಹೋರಾಡಲು ನಾವೆಲ್ಲರೂ ಸಂಕಲ್ಪ ಮಾಡಬೇಕೆಂದು ಕರೆ ಕೊಟ್ಟರು.

ಕಾರ್ಯಕ್ರಮದಲ್ಲಿ ನೇರಳೆ ಗ್ರಾಮದ ರೈತ ಮುಖಂಡರ ಮತ್ತು ರೈತರುಗಳಾದ ಮಹೇಶ್ ಕೆ. ಕಿರಣ್, ಮಹದೇವಸ್ವಾಮಿ, ಸಿದ್ದರಾಜು, ದೊಡ್ಡಮಾದೇಗೌಡ, ಮಹೇಶ್, ಮಹದೇವ್, ಗ್ರಾಪಂ ಮಾಜಿ ಅಧ್ಯಕ್ಷ ಮಹೇಶ್, ಮಲ್ಲೇಶ್, ಶಂಕರ್ ನಾಯ್ಕ್, ಸುನಿಲ್, ಪ್ರದೀಪ್, ಶಿವರಾಜು, ಬಸವರಾಜು ಸೇರಿದಂತೆ ಗ್ರಾಮದ ಯಜಮಾನರು ಸೇರಿದಂತೆ ನೂರಕ್ಕೂ ಹೆಚ್ಚು ಜನ ಭಾಗವಹಿಸಿದ್ದರು.

Leave a Reply

Your email address will not be published. Required fields are marked *

Related Post

ಸಂಘಟನೆಗೆ ಸೇರ್ಪಡೆಸಂಘಟನೆಗೆ ಸೇರ್ಪಡೆ

ನಂಜನಗೂಡು ತಾಲೂಕು ಕವಲಂದೆ ಹೋಬಳಿ ಗಟ್ಟವಾಡಿವಾಡಿಪುರ ಗ್ರಾಮದಲ್ಲಿ ರೈತ ಸಂಘಟನೆಯ ತತ್ವ ಸಿದ್ಧಾಂತ ಒಪ್ಪಿಕೊಂಡು 120ಕ್ಕೂ ಹೆಚ್ಚು ಯುವಕರು ರೈತರು ಸಂಘಟನೆಗೆ ಸೇರ್ಪಡೆಗೊಂಡರು.. ಸಂಘಟನೆ ಇವರ ಗ್ರಾಮವನ್ನು ಅಭಿವೃದ್ಧಿ ಮಾಡುವ ಶಕ್ತಿಯನ್ನು ಬಸವೇಶ್ವರ ದೇವರು ಇವರಿಗೆ ಕರುಣಿಸಲಿ. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ